Wednesday, 1 June 2016


     ಜಾರುತಿದೆ 


ನಿನ್ನ ಮೌನ ನನ್ನ  
ಕಂಗಾಲಾಗಿಸಿತ್ತಲ್ಲ  
ಈ ದಾವಂತದಲೆಲ್ಲೋ  
ಕೆರೆದಾಗ ಹಳೇ...... ಗಾಯ 
ಹೊಸತಾಯಿತು 
ಮುಲಾಮು ಎಲ್ಲಿದೆ  
ಎಂದು 
ಕೇಳಿದಾಗಲಾದರು  
ಮೌನ ಮುರಿಯುವೆಯ   
ಅಯ್ಯೋ  
ರಕ್ತ  
ಜಾ   
   ರು     
     ತಿ 
        ದೆ 
                                                ಸಿರಾ ಸೋಮಶೇಖರ 





Thursday, 26 May 2016

ಕಿಟಕಿಯ ಕಥೆ

           ಪ್ರಕೃತಿಯ ಅತಿ ದೊಡ್ಡ ಆವಿಷ್ಕಾರದಲ್ಲಿ ಮನುಷ್ಯ.  ಮನುಷ್ಯ ತನ್ನ ಸುತ್ತ ಅನೇಕಗಳನ್ನು ತಯಾರಿಸಿದ್ದಾನೆ,ಅವು ಎಷ್ಟೊಂದು ಕುತೂಹಲಕಾರಿ. ಮನುಷ್ಯನ ಆವಿಷ್ಕಾರದಲ್ಲಿ  ನನಗೆ ಎಲ್ಲದಕಿಂತ ಕುತೂಹಲ ಮೂಡುವುದು ಈ ಗೋಡೆ,ಕಿಟಕಿ, ಬಾಗಿಲುಗಳು ಮತ್ತು ಪ್ರೀತಿಯ ಮೇಲೆ. 
       ಈಗ  ಕಿಟಕಿಯ ಸಮಾಚಾರಗಳಿಗೆ ಬರೋಣ . ಕಿಟಕಿಯನ್ನು  ಮೊಟ್ಟಮೊದಲ ಅತಿ ದೊಡ್ಧ ಲೋಕಲ್ ಸಂಪರ್ಕ ಸಾಧನ . ಇದರಿಂದ ವಿನಿಮಯವಾಗದ ವಸ್ತುಗಳೇ ಇಲ್ಲವೇನೊ,ಸಕ್ಕರೆ,ರವೆ,ಹಪ್ಪಳ ಅಡುಗೆ ಮನೆಯ ಸಕಲ ಸೌಭಾಗ್ಯವೂ....  ಚನ್ನಾಗಿ ಅಡುಗೆ ಮಾಡುವವರಿದ್ದರೆ ಅವರಡುಗೆಯ ಪರಿಮಳವೂ......  . ಕಿಟಕಿಯ ಒಂದು ಪುರಾಣ ಹೇಳ್ತೀನಿ ನಿಮಗೆ  ನಮ್ಮ ಮನೆಯ ಪಕ್ಕದ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರು ಸಣ್ಣ ಖರ್ಚಿಗೂ ಹೆದರುತ್ತಿದ್ದವರು, ನಕಲಿ ಕೀಲಿ ಕೈ ಮಾಡಿಸಲು ವೃಥಾ ಖರ್ಚು ಎಂದು ಒಂದೇ ಬೀಗದ ಕೈ ಬಳಸುತ್ತಿದ್ದರು. ಅದಕ್ಕೆ ಕಿಟಕಿಗೆ ಒಂದು ದಾರವನ್ನು ಇಳಿ ಬಿಟ್ಟು ಅದಕ್ಕೆ ಬೀಗವನ್ನು ಬಿಗಿದು ಬಳಸುತ್ತಿದ್ದರು. ಮುಂದೆ ಕಥೆ ಏನಾಯಿತು ಎಂದು ಈಗಾಗಲೇ ನಿಮ್ಮ ಬುದ್ದಿಗೆ ಬಂದಿರುತ್ತದೆ. ಒಂದು ದಿನ ಬೀಗ ಮನೆಯೊಳಗೇ ಬಿತ್ತು ,ಗಂಡ ಹೆಂಡತಿ ಮನೆಯೊರಗೆ ಬೀಗ ಜಜ್ಜ ಬೇಕೋ ಬೇಡವೋ ಎಂದು.  ಸುಮ್ಮನೆ ನೂರಾರು ರೂಪಾಯಿ ಖರ್ಚು ಎಂದು.  ಇದು ಆಗಿದ್ದು ನಿನ್ನಿoದಲೇ ಎಂದು ಜಗಳವಾಡುತ್ತಿದ್ದರು. ಕೊನೆಗೆ ಯಾರೋ ಹಿರಿಯರು ಬಂದರು ಉಗಿದರು ಬೀಗ ಜಜ್ಜಿದರು. ನಾವುಗಳು ಈ ಹೊಸ ಮನೆಗಳನ್ನು ನೋಡಲು ಹೋದಾಗ ಹೀಗೆ ಹೇಳುವುದು ಸಾಮಾನ್ಯ,  
            ಸರ್ ಮನೆಯೇನೋ ಚನ್ನಾಗಿದೆ ಆದ್ರೆ ಕಿಟಕಿ ಸ್ವಲ್ಪ ದೊಡ್ಧದಾಗಿರ ಬೇಕಿತ್ತು.... 
            ಕಿಟಕಿಯ ಪಕ್ಕ ಬೆಡ್ ಬರೋ ರೀತಿ ಇರಬೇಕಿತ್ತು..... 
            ಅಯ್ಯೋ ಅಡುಗೆ ಮನೆ ಕಿಟಕಿ  ತುಂಬ ಚಿಕ್ಕದಾಯಿತಲ್ಲ........   
       ನೋಡಿ ನಮಗೆ ಗೊತ್ತೋ ಗೊತ್ತಿಲ್ಲದೆಯೋ ಕಿಟಕಿಗಳ ಆರಾಧಕರಾಗಿದ್ದೇವೆ ಇನ್ನು ಒಂದು ಉದಾಹರಣೆ ಎಂದರೆ ನಾವು ಬಸ್ ನಲ್ಲೋ ರೈಲಿನಲ್ಲೋ ಹೊಡೆದಾಡುವುದು ಕಿಟಕಿಯ ಪಕ್ಕ ದ ಸೀಟಿಗಾಗಿ ಅಲ್ಲವೇ,ಇವೆಲ್ಲ ಆಗುವುದು ಕಿಟಕಿಯ ಮೇಲೆ ಇರುವ ನಮ್ಮ ಪ್ರೀತಿಯಿಂದಾಗಿ, ವ್ಯಾಮೋಹದಿಂದ. 
        
       ಕಿಟಕಿಗಳನ್ನು ಕಂಡರೆ ಈ ಮೂವರಿಗೆ ಅತಿ ಪ್ರೀತಿ,ಕಳ್ಳರಿಗೆ,ಪ್ರೇಮಿಗಳಿಗೆ ಹಾಗೂ ಕುತೂಹಲಿಗಳಿಗೆ. ಕಿಟಕಿಗೂ ಓಬಿರಾಯನ ಕಾಲದ ಸಂಬಜ. ಷಹಜಾನ್ ತಾನು ಪ್ರೀತಿಯಿಂದ ಕಟ್ಟಿಸಿದ ತಾಜ್ ಮಹಲ್ಅನ್ನು ಕಿಟಕಿಯಲ್ಲೇ ನೋಡಿ ಸತ್ತಿದ್ದು.ಹಳೆ ಕಾಲದ ಸಿನಿಮಾಗಳಲ್ಲಿ ಹೀರೊಗಳು ಹಾರುತ್ತಿದ್ದುದೆ ಕಿಟಕಿಗಳಿಂದ. ಈ ಹುಡುಗಿಯರಿಗೆ,ಕವಿಗಳಿಗೆ,ಕಿವಿಗಳಿಗೆ ಕಿಟಕಿ ಆವಾಸ ಸ್ಥಾನ? ಅದ್ಯಾವನೋ  ಅದೇನನ್ನೋಕಿಟಕಿಯಿಂದ ಕದ್ದು ನೋಡಿದ್ದು ಒಂದು ದಿನದ ಎಪಿಸೋಡ್ ಆಗಿದ್ದು.
 ಕನಕದಾಸರು ಉಡುಪಿಯ ಕೃಷ್ಣನನ್ನು ನೋಡಲು ಹೋಗುವರು. ಮೊದಲೇ ಉಡುಪಿ ವೈದಿಕರು, ಶೂದ್ರನನ್ನು ದರ್ಶನ ಮಾಡಲು ಬಿಡುವರೇ? ಬಿಡಲಿಲ್ಲ ಕನಕನನ್ನು ಹೊಡೆದರು ಬಡಿದರು ವೈದಿಕರು ಕೃಷ್ಣ ನ ತತ್ವ ವನ್ನು ಎತ್ತಿ ಹಿಡಿದರು, (ಈಗಲೂ ಎತ್ತಿ ಹಿಡಿಯಲು ಹೋಗುತ್ತಿದ್ದಾರೆ).ಕನಕ ಬಿಡುವನೆ? ಇಲ್ಲ ಕನಕನನ್ನು ಕೃಷ್ಣ ಬಿಡುವನೆ? ಕನಕ ನ ಹಾಡಿಗೆ ಮನಸೋಲದವರುoಟೆ ಕೃಷ್ಣ ಸೋತ ಗೋಡೆ ಯಲ್ಲಿ ದೊಡ್ಡ ಕಿಂಡಿಯಾಯಿತು ಕೃಷ್ಣನೇ ಕಿಂಡಿಯಿಂದ ಕನಕನನ್ನು ನೋಡಿದ ಇತಿಹಾಸ ಸೃಷ್ಟಿಯಾಯಿತು ಜೊತೆಗೆ ಪುರಾಣವೂ.ರಾಜಕೀಯವೂ.....!!!   
       ಈ ಮೇಲಿನ ಕಥೆಯಲ್ಲಿ  ಕಿಟಕಿಯೇ ಪ್ರಮುಖ ಪಾತ್ರದಲ್ಲಿರುವ ಹಾಗೂ  ಕಿಟಕಿಯ ಬಗ್ಗೆ ಇರುವ ಮೊತ್ತ ಮೊದಲ ಕಥೆ ಇದು. ಆದರೆ ಇದು ಕೇವಲ ಕನಕರ ಕಾಲಕ್ಕೆ ನಿಲ್ಲಲಿಲ್ಲ ಈಗಲೂ ಪರಿಸ್ಥಿತಿ ಅನೇಕ ಕಡೆ ಬಾರಿ ಬದಲಾವಣೆಯೇನು ಕಂಡಿಲ್ಲ,ದೇವಸ್ಥಾನದ ಹೊರಗೆ ನಿಂತು ದೇವರನ್ನು ಕಿಟಕಿಯಯಿಂದಲೇ ನೋಡುವ ಸಾದವಕಾಶ ನಮ್ಮ ನಿಮ್ಮಂತವರಿಗೆ. ನಾವು ಮಕ್ಕಳಾಗಿದ್ದಾಗ ಭಾನುವಾರದ ಡಿಡಿ ೧ ನ ಚಲನಚಿತ್ರಗಳೇ ಸರ್ವಸ್ವ.  ನಮ್ಮ ಮನೆಯಲ್ಲೇನೋ ಟಿ. ವಿ ಇತ್ತು ಆದರೆ ಊರಿಗೆ ಇದ್ದದ್ದು ಒಂದೇ ಟಿ ವಿ ಬೇರೆ. ಬೇರೆ ಮಕ್ಕಳು ಬಾಗಿಲಿನಲ್ಲಿ ಕೂರುವಹಾಗಿಲ್ಲ ಅವರಿಗೆ ಕಿಟಕಿಯೇ ರಾಜಸೀಟ್.                                                                                                                                ಸಿರಾ ಸೋಮಶೇಖರ್